ಶ್ರೀ ವಿ. ಶಂಕರ್, ಭಾ.ಆ.ಸೇ.

ಜಿಲ್ಲಾಧಿಕಾರಿಗಳು,

ಬೆಂಗಳೂರು ನಗರ ಜಿಲ್ಲೆ.

ಶ್ರೀ ಪಿ.ಎಸ್.ಕಾಂತರಾಜ್, ಕೆ.ಎ.ಎಸ್

ಅಪಾರ ಜಿಲ್ಲಾಧಿಕಾರಿಗಳು ಹಾಗೂ ಉಪ ಆಯುಕ್ತರು,

ಧಾರ್ಮಿಕ ದತ್ತಿ ಇಲಾಖೆ ೨೦೧೭ನೇ ಕರಗ ಉತ್ಸವ ಸಮಿತಿ

ಶ್ರೀ ಜಿ.ವಿ. ಶ್ರೀಧರ್

ಮುಜರಾಯಿ ತಹಸೀಲ್ದಾರ್ ಜಿಲ್ಲಾಧಿಕಾರಿಗಳ ಕಚೇರಿ

ಬೆಂಗಳೂರು ನಗರ ಜಿಲ್ಲೆ.

ಶ್ರೀ ಪಿ.ದಿನೇಶ್

ಜಿಲ್ಲಾಧಿಕಾರಿಗಳು,

ಬೆಂಗಳೂರು ನಗರ ಜಿಲ್ಲೆ.

ಶ್ರೀ ಎಮ್. ನಾರಾಯಣಸ್ವಾಮಿ

ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಧರ್ಮರಾಯಸ್ವಾಮಿ ದೇವಾಲಯ,

ಬೆಂಗಳೂರು ಹಾಗೂ ಖಜಾಂಚಿ, ೨೦೧೭ನೇ ಕರಗ ಉತ್ಸವ ಸಮಿತಿ .

ಶ್ರೀಮತಿ ಇಂದಿರಾ ಎಸ್.ಎನ್.

ಸ್ವಾಗತ ಸಮಿತಿ ಅಧ್ಯಕ್ಷರು,

೨೦೧೭ನೇ ಕರಗ ಉತ್ಸವ ಸಮಿತಿ

೨೦೧೭ನೇ ಕರಗ ಉತ್ಸವ ಸಮಿತಿ ಸದಸ್ಯರುಗಳು


ಶ್ರೀ ಎಮ್.ಕೆ ಗುಣಶೇಖರ್
ಶ್ರೀ ಬಿ.ಎ. ಕೃಷ್ಣಮೂರ್ತಿ
ಡಾ. ಕೆ.ಲಕ್ಷ್ಮಣ
ಶ್ರೀ ಎಮ್. ಪಿ. ಪುರುಷೋತ್ತಮ್
ಶ್ರೀ ಸಿ.ಯತ್ರಪ್ಪ.
ಡಾ.ಕೆ. ಶಂಕರನಾರಾಯಣ
ಶ್ರೀ ಬಿ.ಎಲ್ . ಅಶೋಕಕುಮಾರ್

ಶ್ರೀ ಸಿ. ಬಲರಾಮಗೌಡರು, ಕುಲಗೌಡರು
ಶ್ರೀ ಎಸ್. ಮಂಜುನಾಥ್ ಕಿರಿಗೌಡರು
ಶ್ರೀ ಎಸ್. ಪ್ರಕಾಶ್ (ಜಮೀನ್)
ಶ್ರೀ ಎಮ್ ಗೋಪಾಲಪ್ಪ
ಶ್ರೀ ಎಸ್ ಮಧು
ಶ್ರೀ ವಿ. ಹರೀಶ್
ಶ್ರೀ ಎಸ್. ಷಣ್ಮುಗಂ

ಶ್ರೀ ಜಿ. ಬಾಲಕೃಷ್ಣ( ಸೂರಿ)
ಶ್ರೀ ಎನ್. ಜಯಶೇಖರ್
ಶ್ರೀ ವಸಂತಕುಮಾರ್ ಎನ್
ಶ್ರೀ ಆನೇಗೌಡರ ಎ. ರಾಜಶೇಖರ್
ಶ್ರೀ ಎನ್. ಆರ್ ಸಂತೋಷ್ ಕುಮಾರ್
ಶ್ರೀ ಕೆ ವಿಜಯ್ ಕುಮಾರ್

ಶ್ರೀ ವಿ. ಅರುಣ್ ಕುಮಾರ್ (ಗಂಟೆಪೂಜಾರಿ)
ಶ್ರೀ ಜಿ. ಪ್ರೇಮ್ ಕುಮಾರ್
ಶ್ರೀ ಕೆ.ಗೋಪಿ ( ಕುಟ್ಟಿ)
ಶ್ರೀ ಎಸ್ . ಸುನಿಲ್ ಕುಮಾರ್
ಶ್ರೀ ಎಸ್.ಸಿ. ಸುಬ್ರಮಣಿ( ಸುಬ್ಬು)
ಶ್ರೀ ಕೆ. ಸತೀಶ್ ( ಪಲ್ಸರ್)
ಶ್ರೀ ವಿ. ಗಿರೀಶ್

ಶ್ರೀ ಎಸ್. ಮಂಜುನಾಥ್ (ಆಡಿಟರ್)
ಶ್ರೀ ಎಸ್. ಸುದರ್ಶನ್
ಶ್ರೀ ಎಸ್. ದೀಪಕ್( ದೀಪು)
ಶ್ರೀ ಎಲ್ . ಶಂಕರನಾರಾಯಣ್
ಶ್ರೀ ಸಿ. ಮಂಜುನಾಥ್
ಶ್ರೀ ಎ. ರಮೇಶ್ (ಕೋಲ್ಕಾರರು)
ಶ್ರೀ ಎಮ್. ಸುಬ್ರಮಣಿ
ಶ್ರೀ ಎಮ್. ಶಂಕರ್

ಬೆಂಗಳೂರು ಕರಗದ ಸಂಕ್ಷಿಪ್ತ ಇತಿಹಾಸ ತಿಳಿಯೋಣ ಬನ್ನಿ



            ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ  ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ 'ಕುಂಭ' ಎಂಬ ಅರ್ಥ ಇದೆ. ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ  ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಡುತ್ತಿದೆ. ಕರ್ನಾಟಕ ರಾಜ್ಯದ ಬೆಂಗಳೂರು, ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿದೆ. ಬೆಂಗಳೂರಿನ ಕರಗ ಪ್ರಸಿದ್ಧಿಯಾಗಿದೆ.

ನಿತ್ಯ ಸೇವೆಗಳು

ಬೆಳಿಗ್ಗೆ ಅಭಿಷೇಕ ೫:೩೦
ಬೆಳಿಗ್ಗೆ ಪುಷ್ಟಲಂಕಾರ ೬ :೦೦
ಭಕ್ತಾದಿಗಳಿಗೆ ದರ್ಶನ ೭ :೦೦ ಯಿಂದ ೧೦ :೩೦ ವರಗೆ
ರಾತ್ರಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ೭ :೩೦
ಭಕ್ತಾದಿಗಳಿಗೆ ದರ್ಶನ ೭ :೩೦ ಯಿಂದ ೯ :೦೦ ವರಗೆ

ಇತರ ಉತ್ಸವಗಳು

ಭೀಮನ ಅಮಾವಾಸ್ಯೆ
ದ್ರೌಪದಿದೇವಿ ಜಯಂತಿ
ವಿಜಯ ದಶಮಿ
ಧನುರ್ ಮಾಸಪೂಜೆ
ರಥಸಪ್ತಮಿ
ಚಂಡಿಹೋಮ
ಕಾಮನ ಹಬ್ಬ
ಮಹಾಶಿವರಾತ್ರಿ

ಹತ್ತಿರದ ಪ್ರವಾಸಿ ತಾಣಗಳು

ಶ್ರೀ ಸ್ವಷ್ಮಿನರಶ್ಮಿಹಸ್ವಾಮಿ ದೇವಸ್ಥಾನ ಬಳೇಪೇಟೆ
ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ ಮಲ್ಲೇಶ್ವರಂ
ಇಸ್ಕಾನ್ ದೇವಸ್ಥಾನ
ಶ್ರೀ ದೊಡ್ಡಗಣಪತಿ ದೇವಸ್ಥಾನ , ಬಸವನಗುಡಿ.
ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ, ಗವಿಪುರಂ.
ಶ್ರೀ ಕುಮಾರಸ್ವಾಮ್ ದೇವಸ್ಥಾನ, ಹನುಮಂತನಗರ.
ಶ್ರೀ ರಾಮಾಂಜನೇಯ ದೇವಸ್ಥಾನ, ಹನುಮಂತನಗರ.
ಶ್ರೀ ಕಾರಂಜಿ ಆಂಜನೇಯ ದೇವಸ್ಥಾನ, ಬುಲ್ ಟೆಂಪಲ್ ರೋಡ್.
ಶ್ರೀ ಮಹಾಗಣಪತಿ ದೇವಸ್ಥಾನ,ಮಲ್ಲೇಶ್ವರಂ ಸ್ಯಾಂಕಿ ಟ್ಯಾಂಕ್ ವಯೋವೃದ್ಧರ ಉದ್ಯಾನವನ
ಅಲಸೂರು ಕೆರೆ ಮತ್ತು ಶ್ರೀ ಸೋಮೇಶ್ವರ ದೇವಸ್ಥಾನ
ಹೆಬ್ಬಾಳ ಕೆರೆ ಪ್ರವಾಸಿ ತಾಣ
ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಹೈಕೋರ್ಟ್
ವಿಶ್ವೇಶ್ವರಯ್ಯ ಮ್ಯೂಜಿಯಂ
ಬನ್ನೇರಘಟ್ಟ ನ್ಯಾಶನಲ್ ಪಾರ್ಕ್
ಲಾಲಬಾಬ್
ಟಿಪ್ಪು ಪ್ಯಾಲೇಸ್
ರಾಗಿಗುಡ್ಡದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ
ಜವಾಹರಲಾಲ್ ನೆಹರು ಪ್ಲಾನೇಟರಿಯಂ
ಇಂದಿರಾಗಾಂಧಿ ಮಕ್ಕಳ ಉತ್ಯನವನ
ಶ್ರೀ ರಾಜೇಶ್ವರಿ ದೇವಸ್ಥಾನ, ಶ್ರೀಕೈಲಾಸಾಶ್ರಮ
ಶ್ರೀ ಕೃಷ್ಣರಾಜೇಂದ್ರ ಮಾರ್ಕೆಟ್
ಬೆಂಗಳೂರು ಮಹಾನಗರ ಪಾಲಿಕೆ ಬಿಲ್ಡಿಂಗ್ ಮತ್ತು ಟೌನಹಾಲ .

ಮುಂಬರುವ ಸುದ್ದಿಗಳು

ಬೆಳಿಗ್ಗೆ ೪ ಗಂಟೆಗೆ ಧ್ವಜಾರೋಹಣ ೦೩ -ಏಪ್ರಿಲ್ -೨೦೧೭
ರಾತ್ರಿ ೧೦ ಗಂಟೆಗೆ ದೇವರ ಉತ್ಸವ ೦೩ -ಏಪ್ರಿಲ್ -೨೦೧೭
ಮಧ್ಯಾಹ್ನ ೧೨:೩೦ ಗಂಟೆಗೆ ಕರಗದ ಕುಂಟೆ ( ಕಬ್ಬನ್ ಪಾರ್ಕ್) ವಿಶೇಷ ಪೂಜೆ ೦೪-ಏಪ್ರಿಲ್ -೨೦೧೭
ಮಧ್ಯಾಹ್ನ ೧೨:೩೦ ಗಂಟೆಗೆ ಸಂಪಂಗಿ ಕೆರೆಯ ಅಂಗಳದಲ್ಲಿ ವಿಶೇಷ ಪೂಜೆ ೦೫ -ಏಪ್ರಿಲ್ -೨೦೧೭
ಮಧ್ಯಾಹ್ನ ೧೨:೩೦ ಗಂಟೆಗೆ ಶ್ರೀ ಮುನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ( ಲಾಲಾಬಾಗ್ ) ೦೬ -ಏಪ್ರಿಲ್ -೨೦೧೭
ಮಧ್ಯಾಹ್ನ ೧೨:೩೦ ಗಂಟೆಗೆ ಶ್ರೀ ಜಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ( ಗವಿಪುರ) ೦೭ -ಏಪ್ರಿಲ್ -೨೦೧೭
ಬೆಳಿಗ್ಗೆ ೧೦-೩೦ ಗಂಟೆಗೆ ಶ್ರೀ ಅಣ್ಣಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ( ಕೆಂಪೇಗೌಡ ವೃತ್ತದ ಬಳಿ) ೦೮ -ಏಪ್ರಿಲ್ -೨೦೧೭
ಮಧ್ಯಾಹ್ನ ೧೨:೩೦ ಗಂಟೆಗೆ ಕರಗದ ಕುಂಟೆ ( ಕಬ್ಬನ್ ಪಾರ್ಕ್) ವಿಶೇಷ ಪೂಜೆ ೦೯ -ಏಪ್ರಿಲ್ -೨೦೧೭
ಮಧ್ಯಾಹ್ನ ೧೨:೩೦ ಗಂಟೆಗೆ ಮರಿಸ್ವಾಮಿ ಮಠದಲ್ಲಿ ವಿಶೇಷ ಪೂಜೆ ( ಕಲಾಸಿಪಾಳ್ಯ ) ೧೦ -ಏಪ್ರಿಲ್ -೨೦೧೭
ಬೆಳ್ಳಿಗ್ಗೆ ೧೦-೩೦ ಗಂಟೆಗೆ ಕರಗದ ಕುಂಟೆ ( ಕಬ್ಬನ್ ಪಾರ್ಕ್) ವಿಶೇಷ ಪೂಜೆ ೧೧-ಏಪ್ರಿಲ್ -೨೦೧೭
ರಾತ್ರಿ ೧೨-೩೦ಗಂಟೆಗೆ ಶ್ರೀ ಧರ್ಮರಾಯಸ್ವಾಮಿ ರಥೋತ್ಸವ ಮತ್ತು ಶ್ರೀ ದ್ರೌಪದಿ ದೇವಿಯ ಕರಗೋತ್ಸವ ೧೧-ಏಪ್ರಿಲ್ -೨೦೧೭
ಮುಂಜಾನೆ ೪ ಗಂಟೆಗೆ ಶ್ರೀ ಧರ್ಮರಾಯ ದೇವಸ್ಥಾನದಲ್ಲಿ ಗಾವು ಶಾಂತಿ ೧೨ -ಏಪ್ರಿಲ್ -೨೦೧೭
ರಾತ್ರಿ ೨ ಗಂಟೆಗೆ ಭಾರತ ಕಥಾ ಪ್ರವಚನ ಶಕ್ತಿಸ್ಥಳ ಏಳುಸುತ್ತಿನ ಕೋಟೆ ೧೨ -ಏಪ್ರಿಲ್ -೨೦೧೭
ಸಂಜೆ ೪ಗಂಟೆಗೆ ವಸಂತೋತ್ಸವ ೧೩-ಏಪ್ರಿಲ್ -೨೦೧೭
ರಾತ್ರಿ ೧೦ಗಂಟೆಗೆ ದೇವತಾ ಉತ್ಸವ ೧೩-ಏಪ್ರಿಲ್ -೨೦೧೭
ರಾತ್ರಿ ೧೨ ಗಂಟೆಗೆ ಧ್ವಜವರೋಹಣ ೧೩-ಏಪ್ರಿಲ್ -೨೦೧೭

ಕರಗ ವಿಧಗಳು





ಕರಗ ಹಬ್ಬದ ಆಚರಣೆ ಹಿಂದೂ ತೂಗುತೇದಿಯ(ಕ್ಯಾಲೆಂಡರ್‍) ಮೊದಲ ತಿಂಗಳ ಸಪ್ತಮಿ ಇಂದ ಶುರುವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತದೆ. ಆ 11 ದಿನಗಳ ಗಡುವಿನಲ್ಲಿ, 3 ದಿನಗಳ ಕಾಲ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ಗುಡಿಯಲ್ಲಿ ಹಬ್ಬದ ಚಟುವಟಿಕೆಗಳು ನಡೆಯುತ್ತವೆ. ಹನ್ನೊಂದು ದಿನಗಳ ಸಡಗರದಲ್ಲಿ ಕಾರ‍್ಯಕ್ರಮಗಳು ಹೀಗಿರುತ್ತವೆ:



ಬಾವುಟ ಏರಿಸುವುದು:
            ಉತ್ಸವದ ಮೊದಲ ದಿನವಾದ ಅಂದು ಹಳದಿ ಬಣ್ಣದ ಬಾವುಟವೊಂದನ್ನು ಗುಡಿಯ ಅಂಗಳದೊಳಗೆ, ಬೆಂಗಳೂರು ದಕ್ಷಿಣ ತಾಲ್ಲೂಕು ಜರಗನಹಳ್ಳಿ ಗ್ರಾಮದ ಕುಲಸ್ಥರು ಆಯಾಸಲಿನ ಹಿಂದಿನ ವರ್ಷದಲ್ಲಿ ಕಂಕಣ ಕಟ್ಟಿ ರಕ್ಷಿಸಿದ ೪೫ ಅಡಿ ಎತ್ತರದ ಬಿದಿರಿನ ಕಂಬವನ್ನು ಪೂಜಿಸಿ ಕಡೆದು ಭಕ್ತಿಪೂರ್ವಕವಾಗಿ ಸಾಗಿಸಿಕೊಂಡು ಬಂದು ದೇವಸ್ಥಾನಕ್ಕೆ ಸಮರ್ಪಿಸಿದ ಕಂಬದ ಮೇಲೆ ಹಾರಿಸಲಾಗುತ್ತದೆ.
ಶುದ್ದಿ ಕಾರ‍್ಯ (ಮಡಿವಂತಿಕೆ):
            ತಿಗಳರ ಜನಾಂಗದ ಪ್ರತಿಯೊಬ್ಬರೂ ಈ ಒಂಭಂತ್ತು ದಿನಗಳಲ್ಲಿ ಮಾಂಸಾಹಾರ ಮಧ್ಯಪಾನ, ಧೂಮಪಾನ ಸೇವಿಸದೇ ಹೊರಗೆ ತಯಾರಿಸಿದ ಪಧಾರ್ಥವನ್ನು ಸೇವಿಸದೇ ಶುದ್ಧ ಶಾಖಾಹಾರಿಗಳಾಗಿ ಮನೆಯಲ್ಲಿ ಅಡುಗೆಯನ್ನು ತಯಾರಿಸಿ ನೆಲದ ಮೇಲೆ ಕೂತು ಎಲೆಗಳ ಮೇಲೆ ಒಪ್ಪತ್ತಿನ ಊಟ ಸೇವಿಸುವುದು ವಾಡಿಕೆಯಲ್ಲಿದೆ.
ಶುದ್ಧಿಕಾರ್ಯ ಮತ್ತು ಪುಣ್ಯಸ್ನಾನ :
            ಆದಿಶಕ್ತಿಯು ಭೂಮಿಗೆ ಬರುತ್ತಿರುವುದರಿಂದ ಕೆಟ್ಟ ಶಕ್ತಿಗಳು ಸುಳಿಯಬಾರದೆಂದು ಪೂಜೆಗಳನ್ನು ನಗರದ ಎಂಟು ದಿಕ್ಕುಗಳಿಂದ ಒಂದೊಂದು ದಿನ ಯಾತ್ರೆ ನಡೆಸಿ ಪೂಜಾರರು ಸ್ನಾನ ಮಾಡಿ ಪೂಜೆ ಸಾಮಗ್ರಿಗಳನ್ನು ಪೂರೈಸಿ ದೇವಸ್ಥಾನಕ್ಕೆ ಬರುವುದು ವಾಡಿಕೆ.
ಆರತಿ ಉತ್ಸವ:
            ತಿಗಳ ಸಮುದಾಯದ ಹೆಂಗಸರು ಅಂದು ಅವರ ದೇವತೆಯಾದ ದ್ರೌಪತಿಗೆ ಆರತಿ ಸೇವೆಯನ್ನು ಮಾಡುವರು. ವಿವಿಧ ಹೂವಿನಿಂದ ಅಂದಗೊಂಡ ಅಕ್ಕಿ ಮತ್ತು ಬೆಲ್ಲ ಇರುವ ಪಾತ್ರೆಗಳಿಗೆ, ಮಲ್ಲಿಗೆ ಮತ್ತು ಕನಕಾಂಬರ ಹೂವುಗಳಿಂದ ಸುತ್ತುವರಿದ ಕೋಲನ್ನು ಸಿಕ್ಕಿಸಲಾಗಿರುತ್ತದೆ. ಪಾತ್ರೆಯ ಒಳಗೆ ದೇವಿಗೆಯನ್ನು ಇಡಲಾಗಿರುತ್ತದೆ. ಈ ಆರತಿಯನ್ನು ಹೆಂಗಸರು ತಲೆ ಮೇಲೆ ಹೊತ್ತು ಗುಡಿಯವರೆಗೂ ಬಂದು ಆಮೇಲೆ ಪೂಜೆ ಮಾಡುತ್ತಾರೆ.
ಹಸೀಕರಗ:
            ಚೈತ್ರ ಶುದ್ಧ ತ್ರಯೋದಶೀಯದ ದಿವಸ ಸಂಪಂಗಿ ಕೆರೆಯ ಅಂಗಳದಲ್ಲಿ ನಡುರಾತ್ರಿಯ ಹೊತ್ತಿಗೆ ಪೂಜಾರಿ, ಕುಲಪುರೋಹಿತರು, ವೀರಕುಮಾರರು ಮತ್ತು ಕುಲಸ್ಥರು ಸೇರುವರು. ಅಲ್ಲಿ ಒಂದೆಡೆ ಸ್ಥಳ ಶುದ್ಧಿಮಾಡಿ ಕೆಂಪು ಬಣ್ಣದ ಛತ್ರಿಯನ್ನು ನೆಡುವರು. ಹಿಂದಿನ ಏಳು ದಿನಗಳಿಂದ ವ್ರತ ನಿರತರಾಗಿದ್ದ ವೀರಕುಮಾರರು ಹೊಳೆಯುವ ಹರಿತವಾದ ಶಕ್ತಿಗಳನ್ನು ಅರ್ಧ ಚಂದ್ರಾಕಾರವಾಗಿ ಜೋಡಿಸುವರು. ಇವರು ಕರಗ ದೇವತೆಯ ಹೆಸರಿನಲ್ಲಿ ತಮ್ಮ ಕುಲ ಪುರೋಹಿತರು ಮತ್ತು ಹಿರಿಯರ ಸಮ್ಮುಖದಲ್ಲಿ ದೀಕ್ಷೆ ಕೈಗೊಂಡವರು, ದೇವಿಯ ಆರಾಧನೆಯಲ್ಲಿ ಅಚಲವಾದ ಶ್ರದ್ಧೆ ಭಕ್ತಿಯನ್ನು ಇಟ್ಟಿರುವ ಇವರು ಕರಗಕ್ಕೆ ಅಂಗ ರಕ್ಷಕರು. ಭಕ್ತಿ ದ್ಯೋತಕವಾಗಿ ಕೈಯಲ್ಲಿರುವ ಅಲರುಗಳಿಂದ ಎದೆಯ ಮೇಲೆ ಇವರು ಪ್ರಹಾರ ಮಾಡಿಕೊಳ್ಳುತ್ತಾರೆ.
ಪೊಂಗಲು ಸೇವೆ:
            ಹೆಣ್ಣುಮಕ್ಕಳು ಅಕ್ಕಿ ಮತ್ತು ಬೆಲ್ಲವನ್ನು ಗುಡಿಗೆ ಒಯ್ದು ಗುಡಿಯ ಅಂಗಳದಲ್ಲಿ ಪೊಂಗಲನ್ನು ಮಾಡಿ ದೇವಿಗೆ ಎಡೆ ಮಾಡುವರು.
ಹೂವಿನ ಕರಗ :
            ಬೆಂಗಳೂರಿನ ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ಇತ್ಯಾದಿ ದೇವಸ್ಥಾನಗಳಲ್ಲಿ ಕರಗಧಾರಿಗಳು ಸಂಚರಿಸಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ಗುಡಿಗೆ ಬರುತ್ತಾರೆ. ಇಲ್ಲಿಯ ಒಂದು ವಿಶೇಷವೆಂದರೆ ಭಾವೈಕ್ಯದ ಸಂಕೇತವೆಂಬಂತೆ ಕರಗದಾರಿಗಳು ಮೊದಲು ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡುತ್ತಾರೆ. ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಅಲಂಕೃತಗೊಂಡಿರುತ್ತದೆ. ಕರಗವನ್ನು ಸಾವಿರಾರು ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲ ಗಳಲ್ಲಿ ನಿಂತು ನೋಡುತ್ತಾರೆ. ಬೆಂಗಳೂರಲ್ಲದೇ ವಹ್ನಿಕುಲಸ್ಥಿರಿರುವ ಎಲ್ಲಾ ಪ್ರದೇಶಗಳಲ್ಲಿ ಕರಗ ಮಹೋತ್ಸವ ನಡೆಯುತ್ತವೆ.